Contacts

92 Bowery St., NY 10013

thepascal@mail.com

+1 800 123 456 789

ಅವಿರತ ಪ್ರತಿಷ್ಠಾನ

೨೦೧೫೧೬ ಸಾಲಿನ ಕಾರ್ಯಕ್ರಮಗಳ ವಿವರ

ಕ್ರ.ಸಂ

ಕಾರ್ಯಕ್ರಮ

ದಿನಾಂಕ

ಸ್ಥಳ

ಬೇಂದ್ರೆ ಬೆಳಗು: ಬೇಂದ್ರೆ ಕಾವ್ಯದ ನಾದಲೀಲೆ

ಏಪ್ರಿಲ್ ೨೦೧೫, ಭಾನುವಾರ

ಕೆ.ಎಚ್.ಕಲಾಸೌಧ,

ಹನುಮಂತ ನಗರ, ಬೆಂಗಳೂರು

ವರಕವಿ ಬೇಂದ್ರೆಯ ಆಯ್ದ ಕವನಗಳ ಗಾಯನ ಕಾರ್ಯಕ್ರಮ. ಅವಿರತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ರಾಮಚಂದ್ರ ಹಡಪದ್, ಗಾರ್ಗಿ, ನಯನತಾರ ಹಾಗೂ ಶೃತಿ ಅವರು ತಮ್ಮ ಕಂಠಸಿರಿಯಿಂದ ಬೇಂದ್ರೆ ಕವನಗಳ ಹಾಗೂ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು

ಬೇಂದ್ರೆ ಕಾವ್ಯ ಕಮ್ಮಟ:

೧೨ ಏಪ್ರಿಲ್, ೨೦೧೫, ಭಾನುವಾರ

ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು

ಬೇಂದ್ರೆ ಕಾವ್ಯಗಳ ಅಧ್ಯಯನವನ್ನೊಳಗೊಂಡ ಒಂದು ದಿನದ ಕಮ್ಮಟವನ್ನು ಏರ್ಪಡಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು, ಪತ್ರಕರ್ತರು, ಲೇಖಕರು, ಶಿಕ್ಷಕರು, .ಟಿ. ಉದ್ಯೋಗದವರು ಹೀಗೆ ವಿವಿಧ ಹಿನ್ನೆಲೆಯ ಅಭ್ಯರ್ಥಿಗಳು ಭಾಗಿಯಾಗಿದ್ದ ಕಮ್ಮಟದ ಸಾರಥ್ಯವನ್ನು ಕವಿಗಳಾದ ಎಚ್.ಎಸ್.ವೆಂಕಟೇಶ ಮೂರ್ತಿ, ಎಚ್.ಎಸ್.ರಾಘವೇಂದ್ರ ರಾವ್, .ಎಲ್.ನಾಗಭೂಷಣ್ ಸ್ವಾಮಿ ಹಾಗೂ ಕೆ.ವೈ.ನಾರಾಯಣ ಸ್ವಾಮಿ ಅವರು ವಹಿಸಿದ್ದರು.

ವಿಶ್ವ ಪರಿಸರ ದಿನ

ಜೂನ್, ೨೦೧೫, ಭಾನುವಾರ

ಕಲಾಗ್ರಾಮ, ಬೆಂಗಳೂರು

ವಿಶ್ವ ಪರಿಸರ ದಿನ ಪ್ರಯುಕ್ತ ಅವಿರತ ಪ್ರತಿಷ್ಟಾನವು, ಆರೇಕಲ್ ಸಂಸ್ಥೆಯ ಸಹಭಾಗಿತ್ವದಲ್ಲಿ, ಮಲ್ಲತ್ತಹಳ್ಳಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಗ್ರಾಮದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

 

 

 

 

 

ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ

ಜೂನ್ ಹಾಗೂ ಜುಲೈ ತಿಂಗಳುಗಳ ಶನಿವಾರ

ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳು

ಪ್ರತಿ ವರ್ಷದಂತೆ ವರ್ಷವೂ ಸಹ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕವನ್ನು ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ೧೨೦ (ನೂರಾ ಇಪ್ಪತ್ತು) ಕ್ಕೂ ಹೆಚ್ಚು ಶಾಲೆಗಳಲ್ಲಿ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಶೈಕ್ಷಣಿಕ ಕಾರ್ಯಾಗಾರ

ಆಗಸ್ಟ್, ೨೦೧೫,

ಶನಿವಾರ

ಚಿಕ್ಕಮುದವಾಡಿ ಸರ್ಕಾರಿ ಪ್ರೌಢಶಾಲೆ, ಬಿಡದಿ ತಾಲ್ಲೂಕು, ರಾಮನಗರ ಜಿಲ್ಲೆ

ಸರ್ಕಾರಿ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದ ಮುಂದಿನ ಹಂತಗಳ ಬಗ್ಗೆ, ಅವಕಾಶಗಳ ಬಗ್ಗೆ, ಅಗತ್ಯವಿರುವ ವಿಷಯಗಳ ಬಗ್ಗೆ ತಿಳಿಸಿಕೊಡುವ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. , ಹಾಗೂ ೧೦ನೇ ತರಗತಿಯ ಸುಮಾರು ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದರು

ನಾನು ಅವನಲ್ಲ, ಅವಳು ಚಿತ್ರ ಪ್ರದರ್ಶನ ಹಾಗೂ ಸಂವಾದ.

೨೭ ಸೆಪ್ಟೆಂಬರ್, ೨೦೧೫, ಭಾನುವಾರ

ಸವಿತಾ ಚಿತ್ರಮಂದಿರ, ಮಲ್ಲೇಶ್ವರ,

ಬೆಂಗಳೂರು

೨೦೧೫೧೬ ಸಾಲಿನಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ, ಸಂಚಾರಿ ವಿಜಯ್ ಅಭಿನಯಿಸಿ, ಲಿಂಗದೇವರು ನಿರ್ದೇಶಿಸಿರುವ ನಾನು ಅವನಲ್ಲಅವಳು ಚಿತ್ರದ ಪ್ರದರ್ಶನವನ್ನು ಹಾಗೂ ಚಿತ್ರ ತಂಡದವರೊಡನೆ ಸಾರ್ವಜನಿಕರಿಗಾಗಿ ಸಂವಾದವನ್ನೂ ಏರ್ಪಡಿಸಲಾಗಿತ್ತು.

ವಿಜ್ಞಾನ ಪ್ರಯೋಗ ಕಾರ್ಯಾಗಾರ

ಅಕ್ಟೋಬರ್, ೨೦೧೫, ಗುರುವಾರ

ಚಿಕ್ಕಮುದವಾಡಿ ಸರ್ಕಾರಿ ಪ್ರೌಢ ಶಾಲೆ,

ಬಿಡದಿ ತಾಲ್ಲೂಕು, ರಾಮನಗರ ಜಿಲ್ಲೆ.

ಕರ್ನಾಟಕ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ, ಅವಿರತ ಪ್ರತಿಷ್ಟಾನವು ಚಿಕ್ಕಮುದವಾಡಿ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೇ ಸ್ವತ: ವಿಜ್ಞಾನ ಪ್ರಯೊಗಗಳನ್ನು ಮಾಡುವುದರ ಮೂಲಕ ಅವರಲ್ಲಿ ವಿಜ್ಞಾನ ವಿಷಯದಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಾಯ

ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ, ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸುವ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಯೋಜನೆಯಡಿಯಲ್ಲಿ ಅವಿರತ ಪ್ರತಿಷ್ಟಾನ ನೋಟ್ ಪುಸ್ತಕ ವಿತರಿಸುವ ನಾಲ್ಕು ಶಾಲೆಗಳು ಆಯ್ಕೆಯಾಗಿದ್ದು, ಶಾಲೆಗಳಿಗೆ ಪ್ರಾಧಿಕಾರವನ್ನು ಪರಿಚಯಿಸಲಾಗಿದೆ.

ಗಂಗಾವತರಣ ಮತ್ತು ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ

೧೫ / ೧೬ ಅಕ್ಟೋಬರ್, ೨೦೧೫, ಗುರುವಾರ, ಶುಕ್ರವಾರ

ಚೌಡಯ್ಯ ಸ್ಮಾರಕ ಭವನ,

ಮಲ್ಲೇಶ್ವರ,

ಬೆಂಗಳೂರು

ವರಕವಿ ಬೇಂದ್ರೆ ಜೀವನ ಕುರಿತಾದ ಗಂಗಾವತರಣ ಹಾಗೂ ಕವಿ ಕೆ.ಎಸ್.ನರಸಿಂಹಸ್ವಾಮಿ ಜೀವನ ಕುರಿತಾದಮೈಸೂರು ಮಲ್ಲಿಗೆ ನಾಟಕಗಳ ಪ್ರದರ್ಶನವನ್ನು ರಂಗ ಸೌರಭ ತಂಡದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

೧೦

ಕ್ರೀಡಾ ದಿನ: ಮನ್ನೆ ಸರ್ಕಾರಿ ಶಾಲೆ, ಗುಬ್ಬಿ

೧೭ ಅಕ್ಟೋಬರ್, ೨೦೧೫,

ಶನಿವಾರ

ಮನ್ನೆ ಸರ್ಕಾರಿ ಶಾಲೆ,

ಗುಬ್ಬಿ

ಆರೇಕಲ್ ಸಂಸ್ಥೆಯ ಸಹಯೋಗದೊಂದಿಗೆ ಗುಬ್ಬಿ ತಾಲ್ಲೂಕಿನ ಮನ್ನೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ದಿನವನ್ನು ಆಯೋಜಿಸಲಾಗಿತ್ತು.

೧೧

ಯಾಕೆ ಕಾಡುತಿದೆ ಸುಮ್ಮನೆ ನನ್ನನು ಪುಸ್ತಕ ಬಿಡುಗಡೆ:

೧೮ ಅಕ್ಟೋಬರ್, ೨೦೧೫, ಭಾನುವಾರ

ಕನ್ನಡ ಸಾಹಿತ್ಯ ಪರಿಷತ್ತು,

ಚಾಮರಾಜ ಪೇಟೆ, ಬೆಂಗಳೂರು

ಲೇಖಕಿ ಸಂಧ್ಯಾರಾಣಿ ಅವರ ಆಯ್ದ ಬರಹಗಳ ಸಂಕಲನ ಯಾಕೆ ಕಾಡುತಿದೆ ಸುಮ್ಮನೆ ನನ್ನನು ಪುಸ್ತಕದ ಬಿಡುಗಡೆಯನ್ನು ಅವಧಿ ಅಂತರ್ಜಾಲ ಪತ್ರಿಕೆ ಹಾಗೂ ಪಲ್ಲವ ಪ್ರಕಾಶನ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

೧೨

ಸರ್ಕಾರಿ ವಿಜ್ಞಾನ ಕಾಲೇಜು: ಶೈಕ್ಷಣಿಕ ಸಲಹೆ/ತರಗತಿ

ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳ ಪ್ರತಿ ಶನಿವಾರ

ಸರ್ಕಾರಿ ವಿಜ್ಞಾನ ಕಾಲೇಜು,

ನೃಪತುಂಗ ರಸ್ತೆ,

ಬೆಂಗಳೂರು

ಸರ್ಕಾರಿ ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಮುಖ್ಯವಾದ ವಿಷಯಗಳಾದ C, ‘SQL’, ‘JAVA’ ಇವುಗಳ ಬಗ್ಗೆ .ಟಿ.ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ತಂಡದಿಂದ ವಿಶೇಷ ಸಲಹಾ ತರಗತಿಗಳನ್ನು ನಡೆಸಲಾಯಿತು. ತರಗತಿಗಳನ್ನು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಪ್ರತಿ ಶನಿವಾರದಂದು ಆಯೋಜಿಸಲಾಗಿತ್ತು.

೧೩

ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ

ಡಿಸೆಂಬರ್ ೨೦೧೫, ಭಾನುವಾರ

ಪ್ರಭಾತ್ ರಂಗಮಂದಿರ,

ಬಸವೇಶ್ವರ ನಗರ,

ಬೆಂಗಳೂರು

ಅವಿರತ ನಾಟಕ ಮಂಡಳಿ ತಂಡದಿಂದ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಅಭಿನಯಿಸಲಾಯಿತು.

೧೪

ವಿಜ್ಞಾನ ಪ್ರಯೋಗ ಕಾರ್ಯಾಗಾರ

೧೯ ಡಿಸೆಂಬರ್, ಶನಿವಾರ

ಹೊಳಲುಗುಂದ ಸರ್ಕಾರಿ ಶಾಲೆ,

ಕುಣಿಗಲ್ ತಾಲ್ಲೂಕು

ಕರ್ನಾಟಕ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ, ಅವಿರತ ಪ್ರತಿಷ್ಟಾನವು ಹೊಳಲುಗುಂದ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಜ್ಞಾನ ಪ್ರಯೋಗಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೇ ಸ್ವತ: ವಿಜ್ಞಾನ ಪ್ರಯೊಗಗಳನ್ನು ಮಾಡುವುದರ ಮೂಲಕ ಅವರಲ್ಲಿ ವಿಜ್ಞಾನ ವಿಷಯದಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

೧೫

ರಂಗವಲ್ಲಿ ರಂಗಗೀತೆಗಳ ಸಂಜೆ

ಜನವರಿ ೨೦೧೬, ಶನಿವಾರ

ಸಂಸ ಬಯಲು ರಂಗಮಂದಿರ,

ರವೀಂದ್ರ ಕಲಾಕ್ಷೇತ್ರ ಹಿಂಭಾಗ,

ಬೆಂಗಳೂರು

ಕವಿ, ನಾಟಕಕಾರ ಗೋಪಾಲ ವಾಜಪೇಯಿ ಹಾಗೂ ಕವಿ, ನಾಟಕಕಾರ, ಚಿಂತಕ ಡಾ|| ಕೆ.ವೈ.ನಾರಾಯಣ ಸ್ವಾಮಿ ಅವರ ನಾಟಕಗಳ ಆಯ್ದ ಗೀತೆಗಳ ಗಾಯನ ಕಾರ್ಯಕ್ರಮ.

ರಾಮಚಂದ್ರ ಹಡಪದ್ ಹಾಗೂ ಸ್ಪರ್ಶ ಅವರ ತಂಡದಿಂದ ಪ್ರಸ್ತುತಪಡಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೃಶ್ಯಕಾವ್ಯ ಸಹಯೋಗ

Leave a Reply

Your email address will not be published. Required fields are marked *