Contacts

92 Bowery St., NY 10013

thepascal@mail.com

+1 800 123 456 789

ಅವಿರತ ಪ್ರತಿಷ್ಠಾನ

ನಾಡು, ನುಡಿ, ಸಂಸ್ಕೃತಿ, ಆರೋಗ್ಯ, ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಅವಿರತ ಪ್ರತಿಷ್ಠಾನವು ೨೦೧೩೧೪ ಸಾಲಿನಲ್ಲಿ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಕ್ರ.ಸಂ.

ಕಾರ್ಯಕ್ರಮ

ದಿನಾಂಕ

ಸ್ಥಳ

ಗ್ರಾಮೀಣ ಭಾಗದ, ಗಡಿ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕಾಗುವಷ್ಟು ಉಚಿತ ನೋಟ್ ಪುಸ್ತಕ ವಿತರಿಸುವುದು ಅವಿರತ ಪ್ರತಿಷ್ಟಾನದ ೨೦೦೯ ರಿಂದ ಈಚೆಗೆ ವಾರ್ಷಿಕ ಕಾರ್ಯಕ್ರಮವಾಗಿದೆ. ಶೈಕ್ಷಣಿಕ ವರ್ಷದಲ್ಲಿ ೧೨೦ (ನೂರಾ ಇಪ್ಪತ್ತು) ಕ್ಕೂ ಹೆಚ್ಚು ಶಾಲೆಗಳಲ್ಲಿ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಕೂರ್ಮಾವತಾರ – ವಿಶೇಷ ಪ್ರದರ್ಶನ ಹಾಗೂ ಸಂವಾದ

ಗಿರೀಶ್ ಕಾಸರವಳ್ಳಿ ನಿರ್ದೇಶನದ, ರಾಷ್ಟ್ರಪ್ರಶಸ್ತಿ ವಿಜೇತ ಚಲನ ಚಿತ್ರ ’ಕೂರ್ಮಾವತಾರ’ ದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದಲ್ಲದೆ, ಪ್ರೇಕ್ಷಕರು ಹಾಗೂ ಚಲನಚಿತ್ರ ತಂಡದ ನಡುವೆ ಸಂವಾದವನ್ನೂ ಏರ್ಪಡಿಸಲಾಗಿತ್ತು.

೨  ಜೂನ್, ೨೦೧೩, ಭಾನುವಾರ

ಕೆ.ಎಚ್.ಕಲಾಸೌಧ,
ಬೆಂಗಳೂರು

’ಪಂಪ ಭಾರತ’ ನಾಟಕದ ಪ್ರದರ್ಶನ

ಕನ್ನಡದ ಖ್ಯಾತ ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿಯವರು ರಚಿಸಿರುವ, ಬೆಂಗಳೂರು ಸಮುದಾಯ ನಟಿಸಿ, ಪ್ರಮೋದ್ ಶಿಗ್ಗಾಂವ್ ನಿರ್ದೇಶಿಸಿರುವ ’ಪಂಪ ಭಾರತ’ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

೨೫ ಆಗಸ್ಟ್, ೨೦೧೩, ಭಾನುವಾರ

ಕೆ.ಎಚ್.ಕಲಾಸೌಧ, ಬೆಂಗಳೂರು

ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆಒಂದು ಕಾರ್ಯಾಗಾರ

ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ತಾವು ಅಭ್ಯಸಿಸುತ್ತಿರುವ ವಿಷಯಕ್ಕೂ ಅದರ ಬಳಕೆಗೂ ನಡುವೆ ಇರುವ ಅಂತರ, ವೃತ್ತಿ ಕ್ಷೇತ್ರದಲ್ಲಿರುವ ಸವಾಲುಗಳು, ವಿದ್ಯಾರ್ಥಿ ದಿಸೆಯಲ್ಲಿಯೇ ಮುಂದಿನ ಜೀವನಕ್ಕೆ ಬೇಕಾಗಿರುವ ತಯಾರಿ, ಸೂಕ್ತ ಮನಸ್ಥಿತಿ ಇನ್ನಿತರೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಕರ ರೀತಿಯಲ್ಲಿ ತಿಳಿಸಿಕೊಡಲಾಯಿತು.

 

 

ಕನ್ನಡ ವರ್ಣಮಾಲೆಯ ಬಗ್ಗೆ ಒಂದು ಚರ್ಚೆ:

ಇವತ್ತಿನ ಕನ್ನಡ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಹಿನ್ನೆಲೆಯಲ್ಲಿ, ಹೀಗೆ ವಾದ-ಪ್ರತಿವಾದಗಳ ದ್ವಂದ್ವದಾಟದಲ್ಲಿ ಭಾಷೆಯ ಸೂಕ್ಷ್ಮಗಳನ್ನು ಚರ್ಚಿಸಿ, ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ, ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣ ಅಕ್ಷರಗಳನ್ನು ಉಳಿಸಿಕೊಳ್ಳಬೇಕೋ? ಅಥವಾ ಕೈ ಬಿಟ್ಟು ಹೊಸ ವರ್ಣಮಾಲೆಯನ್ನು ಹೊಂದಬೇಕೋ?!  ಎಂಬುದರ ಬಗ್ಗೆ ಮುಕ್ತ ಚರ್ಚೆಯನ್ನು ಆಯೋಜಿಸಲಾಗಿತ್ತು. ೨೮ ಸೆಪ್ಟೆಂಬರ್, ೨೦೧೩, ಶನಿವಾರ ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು

೨೮ ಸೆಪ್ಟೆಂಬರ್, ೨೦೧೩, ಶನಿವಾರ

ಸರ್ಕಾರಿ
ವಿಜ್ಞಾನ
ಕಾಲೇಜು,
ಬೆಂಗಳೂರು

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ

ಚಾಮರಾಜನಗರ ಜಿಲ್ಲೆಯ ಬಿಳಿ ಗಿರಿ ರಂಗನ ಬೆಟ್ಟದ ಅರಣ್ಯಪ್ರದೇಶದ ಆಸುಪಾಸಿನಲ್ಲಿರುವ ೫ ಹಳ್ಳಿಗಳ ಸುಮಾರು (೧೦೦) ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು. ಏಕಕಾಲಕ್ಕೆ ಹಲವು ಉಪತಂಡಗಳನ್ನು ರಚಿಸಿಕೊಂಡು ಪರ್ಯಾಯವಾಗಿ ನಡೆಸಿದ ಈ ತಪಾಸಣೆಯ ವರದಿಯಂತೆ, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆಹಾರ ಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಕೈಗೊಳ್ಳುವಂತೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡಲಾಯಿತು. ಇದೇ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಬ್ಯಾಗ್ ಗಳನ್ನು ಸಹ ವಿತರಿಸಲಾಯಿತು. ೧೫ ನವೆಂಬರ್ ೨೦೧೩, ಶುಕ್ರವಾರ ಟಿ.ಹೊಸೂರು ಸರ್ಕಾರಿ ಶಾಲೆ,ರಾಮಾಪುರ ಸರ್ಕಾರಿ ಶಾಲೆ,
ವೈ.ಕೆ.ಮೊಳೆ ಸರ್ಕಾರಿ ಶಾಲೆ,
ಕೃಷ್ಣಪುರ ಸರ್ಕಾರಿ ಶಾಲೆ,
ಉಪ್ಪಿನ ಮೊಳೆ ಸರ್ಕಾರಿ ಶಾಲೆ

೧೫  ನವೆಂಬರ್ ೨೦೧೩, ಶುಕ್ರವಾರ

ಟಿ.ಹೊಸೂರು
ಸರ್ಕಾರಿ
ಶಾಲೆ,ರಾಮಾಪುರ
ಸರ್ಕಾರಿ ಶಾಲೆ,

ವೈ.ಕೆ.ಮೊಳೆ
ಸರ್ಕಾರಿ
ಶಾಲೆ,

ಕೃಷ್ಣಪುರ
ಸರ್ಕಾರಿ
ಶಾಲೆ,

ಉಪ್ಪಿನ
ಮೊಳೆ
ಸರ್ಕಾರಿ
ಶಾಲೆ

’ಗಾಂಧಿ ಬಂದ’ ನಾಟಕದ ಪ್ರದರ್ಶನ

 

ಲೇಖಕಿ ಎಚ್. ನಾಗವೇಣಿ ಅವರು ರಚಿಸಿರುವ, ’ರಂಗ ಮಂಟಪ’ ತಂಡಕ್ಕಾಗಿ ಚಂಪಾಶೆಟ್ಟಿ ನಿರ್ದೇಶಿಸಿರುವ ’ಗಾಂಧಿ ಬಂದ’ ನಾಟಕದ ಪ್ರದರ್ಶವನ್ನು ಏರ್ಪಡಿಸಲಾಗಿತ್ತು

೭ ಡಿಸೆಂಬರ್ ೨೦೧೩, ಶನಿವಾರ

ಕೆ.ಎಚ್.ಕಲಾಸೌಧ, ಬೆಂಗಳೂರು

ಕೆರೆಗಾಗಿ ಕರೆ

ಸುಮಾರು ೪೪ ಎಕರೆ ವಿಸ್ತೀರ್ಣದಷ್ಟು ಜಾಗದಲ್ಲಿರುವ, ಯಲಹಂಕ ನ್ಯೂಟೌನಿನ ’ಅಳ್ಳಾಲ್ ಸಂದ್ರ’ದ ಕೆರೆಯು ಸರಿಯಾದ ನಿರ್ವಹಣೆಯಿಲ್ಲದೆ ಕೊಳಕಾಗುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯ ಸಂಸ್ಥೆ ’ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟ್ ಅಸೋಸಿಯೇಶನ್’ (Yelahanka United Environment Association – YUVA) ಕೆರೆಯ ಶುದ್ದೀಕರಣಕ್ಕೆ ಮುಂದಾದಾಗ, ಅವಿರತವು ಈ ಸಂಸ್ಥೆಯೊಂದಿಗೆ ಕೈ ಜೋಡಿಸಿ, ಕೆರೆಯ ಶುಚಿತ್ವದ ಬಗ್ಗೆ ಅರಿವು ಮೂಡಿಸಿ ಹಾಗೂ ಅಭಿವೃದ್ದಿ ಕೆಲಸಗಳಿಗಾಗಿ ಮನವಿಯನ್ನೂ ಸಲ್ಲಿಸಿತು.ನಗರ ಅಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಪಿ.ಎನ್.ಶ್ರೀನಿವಾಸಾಚಾರಿ,  ಆದಾಯ ಇಲಾಖೆಯ ಮಾಜಿ ಕಾರ್ಯದರ್ಶಿ ಜಿ.ಎಸ್.ನಾರಾಯಣಸ್ವಾಮಿ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಆಯುಕ್ತರಾದ ಡಾ||ಎಸ್.ಸುಬ್ರಹ್ಮಣ್ಯ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಮಾಜಿ ಕಾರ್ಯದರ್ಶಿಯಾದ ಜಿ.ವಿ.ಕೊಂಗವಾಡ್, ಮಹಾನಗರ ಪಾಲಿಕೆಯ ಯಲಹಂಕ ವ್ಯಾಪ್ತಿಯ ಜಂಟಿ ಆಯುಕ್ತರಾದ ವಿರೂಪಾಕ್ಷ ಮೈಸೂರು, ಪಾಲಿಕೆ ಹಾಗೂ ಒಳಚರಂಡಿ ನಿಗಮದ ಕೆಲವು ಅಧಿಕಾರಿಗಳು ಹಾಗೂ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರು ಭಾಗವಹಿಸಿದ್ದರು ೧೨ ಜನವರಿ ೨೦೧೪, ಭಾನುವಾರ ಅಳ್ಳಾಲ್ ಸಂದ್ರ ಕೆರೆ, ಯಲಹಂಕ ನ್ಯೂ ಟೌನ್

೧೨ ಜನವರಿ ೨೦೧೪, ಭಾನುವಾರ

ಅಳ್ಳಾಲ್
ಸಂದ್ರ ಕೆರೆ,
ಯಲಹಂಕ ನ್ಯೂ
ಟೌನ್

’ಅನಂತ ನಮನ’ ಎಂಬ ಭಾವಗೀತೆಗಳ ಸಂಗೀತ ಸಂಜೆ

ಕನ್ನಡ ಸುಗಮ ಸಂಗೀತ ಕ್ಷೇತ್ರದ ಹೆಸರಾಂತ ಗಾಯಕ, ಸಂಗೀತ ಸಂಯೋಜಕ ರಾಜು ಅನಂತಸ್ವಾಮಿಯವರ ಜನ್ಮದಿನದ ಪ್ರಯುಕ್ತ, ’ಅನಂತ ನಮನ’ ಎಂಬ ಭಾವಗೀತೆಗಳ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು.  ರಾಜು ಅನಂತಸ್ವಾಮಿಯವರ ಶಿಷ್ಯರಾದ ರವಿ ಮುರೂರು ಮತ್ತು ತಂಡ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

೧೮ ಜನವರಿ ೨೦೧೪, ಶನಿವಾರ

ಸುಚಿತ್ರ
ಸಭಾಂಗಣ

Leave a Reply

Your email address will not be published. Required fields are marked *