Contacts

92 Bowery St., NY 10013

thepascal@mail.com

+1 800 123 456 789

ಅವಿರತ ಪ್ರತಿಷ್ಠಾನ

೨೦೧೪೧೫ ಸಾಲಿನ ಕಾರ್ಯಕ್ರಮಗಳ ವಿವರ

ಕ್ರ.ಸಂ

                                                       ಕಾರ್ಯಕ್ರಮ

       ದಿನಾಂಕ

           ಸ್ಥಳ

ಬೆಸಗರಹಳ್ಳಿ ಬೇಸಿಗೆ ಶಿಬಿರ

ಗ್ರಾಮೀಣ ಪ್ರದೇಶದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಹಾಗೂ ಕಂಪ್ಯೂಟರ್ ವಿಷಯಗಳಿಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ, ’ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್’ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ, ’ಅವಿರತ’ ತಂಡವು ಕಂಪ್ಯೂಟರ್ ವಿಷಯಗಳಿಗೆ ಸಂಬಂಧಿಸಿದಂತೆ ಶಿಬಿರದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿತು.

೩೦
ಏಪ್ರಿಲ್ -೭ ಮೇ,
೨೦೧೪

ಬೆಸಗರಹಳ್ಳಿ, ಮಂಡ್ಯ

ಫೇಸ್‍ಬುಕ್ ಕವನ – ಹಡಪದ್ ಗಾಯನ  

ಫೇಸ್‍ಬುಕ್ಕಿನಲ್ಲಿ ಮೂಡಿರುವ ಕವನಗಳಿಗೆ, ಉದಯೋನ್ಮುಖ ಗಾನಪ್ರತಿಭೆ ರಾಮಚಂದ್ರ ಹಡಪದ್ ಅವರಿಂದ ರಾಗ ಸಂಯೋಜಿಸಿ, ಒಂದು ವಿಶಿಷ್ಟ ಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

೧೨ ಮೇ ೨೦೧೪,
ಸೋಮವಾರ

ಕೆ.ಎಚ್.ಕಲಾಸೌಧ

ಕರ್ನಾಟಕಕ್ಕೆ ಈಗ ಒಂದು ಹೊಸ ಪ್ರಾದೇಶಿಕ ಪಕ್ಷ ಅಗತ್ಯವೆ?ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಕುರಿತಾದ ಅಗತ್ಯ, ಸಾಧಕ-ಬಾಧಕಕ್ಕೆಸಂಬಂಧಪಟ್ಟಂತೆ ವಿವರವಾದ ಚರ್ಚೆಯೊಂದನ್ನು ಆಯೋಜಿಸಲಾಗಿತ್ತು.
ಭಾಗವಹಿಸಿದ್ದವರು:
ರಂಗಕರ್ಮಿ ಪ್ರಕಾಶ್ ಬೆಳವಾಡಿ,
ಬನವಾಸಿ ಬಳಗದಿಂದ ವಸಂತ್ ಶೆಟ್ಟಿ,
‘ಅವಿರತ’ ದಿಂದ ಡಾ .ಹಿಮಾಂಶು,
ಸಾಮಾನ್ಯ ಕನ್ನಡಿಗ’ ತಂಡದಿಂದ ಸಂದೀಪ್. ಪಿ.

೧ ಜೂನ್
೨೦೧೪,
ಭಾನುವಾರ

ಸುಚಿತ್ರ
ಸಭಾಂಗಣ

ವನ ಮಹೋತ್ಸವ                                                              

ಅನಾಥ ಮಕ್ಕಳಿಗೆ ಗೌರವಯುತವಾದ ಜೀವನವನ್ನು ರೂಪಿಸಿಕೊಡುವಲ್ಲಿ ಶ್ರಮಿಸುತ್ತಿರುವ ನೆಲೆ ಸಂಸ್ಥೆಯೊಡನೆ ಕೈ ಜೋಡಿಸಿದ ಅವಿರತ ತಂಡವು, ಒರಾಕಲ್ ಸಂಸ್ಥೆಯ ಸಹಯೋಗದೊಂದಿಗೆ ನೆಲೆ ಸಂಸ್ಥೆಯ ಆವರಣದಲ್ಲಿ ವನ ಮಹೋತ್ಸವವನ್ನು ಆಯೋಜಿಸಿತ್ತು.  ಪರಿಸರ ದಿನಾಚರಣೆಯಂದು ಈ   ಕಾರ್ಯಕ್ರಮವನ್ನು ಆಯೋಜಿಸಿದಿದ್ದು ಅರ್ಥಪೂರ್ಣವಾಗಿತ್ತು.

೭ ಜೂನ್
೨೦೧೪, ಶನಿವಾರ

ನೆಲೆ
ನರೇಂದ್ರ,
ಲಗ್ಗೆರೆ,
ಬೆಂಗಳೂರು

‘ಅವಿರತ’ ಉಚಿತ ನೋಟ್ ಪುಸ್ತಕ   

ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕವನ್ನು ವಿತರಿಸಲಾಯಿತು.  ಈ ಶೈಕ್ಷಣಿಕ ವರ್ಷದಲ್ಲಿ ೧೨೦ (ನೂರಾ ಇಪ್ಪತ್ತು) ಕ್ಕೂ ಹೆಚ್ಚು  ಶಾಲೆಗಳಲ್ಲಿ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಜೂನ್ ಹಾಗೂ ಜುಲೈ ತಿಂಗಳುಗಳ ಶನಿವಾರ

ಗ್ರಾಮೀಣ ಸರ್ಕಾರಿ ಕನ್ನಡ ಶಾಲೆಗಳು

ಸೈಕಲ್ ಡೇ

ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟ್ ಅಸೋಸಿಯೇಶನ್ (Yelahanka United Environment Association – YUVA) ಸಹಯೋಗದೊಂದಿಗೆ ಯಲಹಂಕದಲ್ಲಿ ಪರಿಸರ ಕಾಳಜಿ ಪರ ಜಾಗೃತಿಗಾಗಿ ಸೈಕಲ್ ಡೇ ಯನ್ನು ಆಚರಿಸಲಾಯಿತು.

ಜುಲೈ ೨೦೧೪,
ಭಾನುವಾರ

ಯಲಹಂಕ ನ್ಯೂ ಟೌನ್

ಮಾಯಾಲೋಕ – ತೇಜಸ್ವಿ ಹಾದಿಯಲ್ಲೊಂದು ಪಯಣ
ತೇಜಸ್ವಿಯವರ ಜನುಮದಿನದ ಪ್ರಯುಕ್ತ, ’ತೇಜಸ್ವಿ’ಯವರ ಸಾಹಿತ್ಯ ಸಂಜೆಯೊಂದನ್ನೂ ಹಾಗೂ ಕಾರ್ಯಗಾರವೊಂದನ್ನೂ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು, ತೇಜಸ್ವಿಯವರ ಸಾಮಾಜಿಕ ಚಿಂತನೆ, ಹವ್ಯಾಸ. ವಿಜ್ಞಾನ ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಕೆಳಕಂಡ ಗಣ್ಯರು, ಚಿಂತಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಸಂತ ಶೆಟ್ಟಿ
ಡಾ|| ಕೆ.ಪುಟ್ಟಸ್ವಾಮಿ,
ಡಾ||ಕೆ.ವೈ.ನಾರಾಯಣ ಸ್ವಾಮಿ
ಕಾರ್ಯಕ್ರಮದಲ್ಲಿ, ತೇಜಸ್ವಿಯವರ ನೆಚ್ಚಿನ ಹವ್ಯಾಸವಾದ ಪಕ್ಷಿ ಛಾಯಾಚಿತ್ರದ ಬಗ್ಗೆಯೂ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಈಗಿನ ಯುವ ಛಾಯಾಚಿತ್ರಕಾರರನ್ನು ಗುರುತಿಸಲಾಯಿತು.


ಸೆಪ್ಟೆಂಬರ್,
೨೦೧೪
ಭಾನುವಾರ

ಆರ್.ವಿ.ಟೀಚರ್ಸ್
ಕಾಲೇಜು,
ಜಯನಗರ ೨ನೇ
ಬ್ಲಾಕ್, ಬೆಂಗಳೂರು

ತೇಜಸ್ವಿ ಸಾಹಿತ್ಯ – ಕಾಲುದಾರಿಯ ನೋಟ
ತೇಜಸ್ವಿಯವರ ಬರಹಗಳ, ವೈಚಾರಿಕ ದೃಷ್ಟಿಯ ಆಳವಾದ ಅಧ್ಯಯದೆಡೆಗೆ ಸಾಗಲು ಒಂದು ಕಾಲು ದಾರಿಯ ನೋಟ ಹರಿಸುವ ಸಲುವಾಗಿ, ಸಾಹಿತ್ಯ ಮಂಟಪ ಮಾದರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದ ರೂವಾರಿಗಳಾಗಿದ್ದವರು,
ಶಿಬಿರದ ಮುಖ್ಯ ನಿರ್ವಾಹಕರು: ಡಾ|ಕೆ.ವೈ.ನಾರಾಯಣ ಸ್ವಾಮಿ
ಸಂಪನ್ಮೂಲ ವ್ಯಕ್ತಿಗಳು:
ಡಾ. ಮಲ್ಲಿಕಾರ್ಜುನ ಮೇಟಿ ಭಾಷಾ ತಜ್ಞರು ಶಿವಮೊಗ್ಗ
ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಸಹಜ ಕೃಷಿ ಮತ್ತು ಸಂಸ್ಕೃತಿ ಚಿಂತಕರು
ಎನ್. ಸಂಧ್ಯಾರಾಣಿ ಉಪ ಸಂಪಾದಕಿ ಅವಧಿ ಅಂತರ್ಜಾಲ ಪತ್ರಿಕೆ

೧೪,
ಸೆಪ್ಟಂಬರ್
೨೦೧೪,
ಭಾನುವಾರ

ಸರ್ಕಾರಿ
ವಿಜ್ಞಾನ
ಕಾಲೇಜು,
ಬೆಂಗಳೂರು

ಸರ್ಕಾರಿ ಶಾಲೆಯ ಮಕ್ಕಳಿಗೆ ಟೀ-ಶರ್ಟ್

ವಿಜಯನಗರದ ಅತ್ತಿಗುಪ್ಪೆಯ ಸರ್ಕಾರಿ ಪ್ರೌಢಶಾಲೆಯಮಕ್ಕಳು ಆರ್ಥಿಕ ತೊಂದರೆಯಿಂದ ಸರಿಯಾದ ಬಟ್ಟೆ ಇಲ್ಲದ ಕಾರಣ, ಅವಿರತ ತಂಡವು ಅಲ್ಲಿನ ವಿದ್ಯಾರ್ಥಿಗಳಿಗೆ ಟೀ-ಶರ್ಟ್ ವಿತರಿಸಿತು.

೧೩
ಡಿಸೆಂಬರ್,
೨೦೧೪, ಶನಿವಾರ

ಅತ್ತಿಗುಪ್ಪೆ
ಸರ್ಕಾರಿ
ಪ್ರೌಢಶಾಲೆ,
ವಿಜಯನಗರ, ಬೆಂಗಳೂರು

೧೦

ಗ್ರಾಮಾಂತರ ಪೋಷಕರ ಕಾರ್ಯಾಗಾರ 

ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರವನ್ನು ತಿಳಿಸಿಕೊಡುವ ಸಲುವಾಗಿ ದಾವಣಗೆರೆಯ, ದಿದ್ದಿಗೆ ಗ್ರಾಮದ ಪೋಷಕರಿಗೆ ಒಂದು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಾಗಾರದಲ್ಲಿ, ೪ನೇ ತರಗತಿಯಿಂದ ೧೦ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಜೊತೆ ಆಪ್ತ ಸಮಾಲೋಚನೆ ನಡೆಸಿ, ಮಕ್ಕಳ ನಡುವಳಿಕೆ ಬಗ್ಗೆ, ಪೋಷಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಹೇಳಲಾಯಿತು. ಈ ಮಾಹಿತಿಯನ್ನು ಶಾಲೆಯ ಶಿಕ್ಷಕರಿಗೂ ಹಸ್ತಾಂತರಿಸಿ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಗಮನಿಸಲು ಕೇಳಿಕೊಳ್ಳಲಾಯಿತು.

೨೨
ನವೆಂಬರ್,
೨೦೧೪, ಶನಿವಾರ

ರೂರಲ್
ಪಬ್ಲಿಕ್
ಸ್ಕೂಲ್,
ದಿದ್ದಿಗೆ,
ದಾವಣಗೆರೆ

೧೧

ಗ್ರಾಮಾಂತರ ಪೋಷಕರ ಕಾರ್ಯಾಗಾರ  

ಈ ಹಿಂದೆ ನಡೆಸಿದಂತೆ, ದಿದ್ದಿಗೆ ಗ್ರಾಮದಲ್ಲೇ ಎರಡನೇ ಸುತ್ತಿನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಕೌನ್ಸೆಲಿಂಗ್ ಮಾಡಲಾಯಿತು.

ಫೆಬ್ರವರಿ
೨೦೧೫, ಶನಿವಾರ

ರೂರಲ್ ಪಬ್ಲಿಕ್
ಸ್ಕೂಲ್,
ದಿದ್ದಿಗೆ,
ದಾವಣಗೆರೆ

೧೨

ಹಿರಿಯ ನಾಗರೀಕರ ನಡಿಗೆ                                              

ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟದ ಸಹಯೋಗದೊಂದಿಗೆ, ಬೆಂಗಳೂರಿನ ಜಯನಗರದಲ್ಲಿ ಹಿರಿಯ ನಾಗರೀಕರಿಗಾಗಿ ನಡಿಗೆ ಹಾಗೂ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಸ್ಪರ್ಧೆಯಲ್ಲಿ  ೬೦-೭೦ ವರ್ಷ, ೭೧-೮೦ ವರ್ಷ ಹಾಗೂ ೮೦ಕ್ಕೂ ಮೇಲ್ಪಟ್ಟವರು ಎಂದು ಮೂರು ವಿಭಾಗಗಳಿದ್ದು, ಪ್ರತಿ ವಿಭಾಗಗಳಲ್ಲಿಯೂ ಮಹಿಳೆಯರು ಹಾಗೂ ಪುರಷರಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದವು,

೧೪
ಫೆಬ್ರವರಿ,
೨೦೧೫, ಶನಿವಾರ

ಜಯನಗರ,
ಬೆಂಗಳೂರು

 

Leave a Reply

Your email address will not be published. Required fields are marked *